Friday 11 July 2014

ಹಾಸನದಲ್ಲಿ ''ಡೆಸೆರ್ಟ್ ಫ್ಲವರ್' ಪ್ರದರ್ಶನ ಮತ್ತು ಸಂವಾದ

ಸೋಮಾಲಿಯಾದ ಮುಸ್ಲಿಂ ಹೆಣ್ಣುಮಗಳು, ಈಗಿನ ಜಗತ್ ಪ್ರಸಿದ್ದ ರೂಪದರ್ಶಿ ವಾರೀಸ್ ಡೇರೀ ಯ ಆತ್ಮಕತೆ "ಡೆಸರ್ಟ ಫ್ಲವರ್" ಜಗತ್ತಿನ 65 ವಿವಿಧ ಭಾಷೆಗಳಿಗೆ ಅನುವಾದವಾಗಿದೆ. ಹಿರಿಯ ಲೇಖಕ ಪತ್ರಕರ್ತ ಡಾ. ಜಗದೀಶ್ ಕೊಪ್ಪ ಈ ಕೃತಿಯನ್ನು ಕನ್ನಡಕ್ಕೆ "ಮರುಭೂಮಿಯ ಹೂ" ಹೆಸರಲ್ಲಿ ಅನುವಾದಿಸಿದ್ದಾರೆ. ಸಹಮತ ವೇದಿಕೆ ಹಾಸನ ಮತ್ತು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ದಿನಾಂಕ 20 ಜುಲೈ ಭಾನುವಾರ ಬೆಳಿಗ್ಗೆ 10.30ಕ್ಕೆ ಹಾಸನದ 'ಕಸಾಪ ಭವನ'ದಲ್ಲಿ 'ಡೆಸರ್ಟ ಫ್ಲವರ್ 'ಇಂಗ್ಲೀಷ್ ಚಲನಚಿತ್ರ ಪ್ರದರ್ಶನ ಸಂವಾದ ಮತ್ತು ಚರ್ಚೆ ಯನ್ನು ಆಯೋಜಿಸಿದೆ 'ಮರುಭೂಮಿಯ ಹೂ' ಕೃತಿ ಮತ್ತು 'ವಾರೀಸ್ ಡೇರಿ' ಕುರಿತು ಡಾ. ಜಗದೀಶ ಕೊಪ್ಪ., 'ಲೈಂಗಿಕತೆಯ ರಾಜಕಾರಣ' ದ ಕುರಿತು ಡಾ. ಎಚ್ ಎಸ್ ಅನುಪಮ ಹಾಗೂ 'ಮಹಿಳಾ ಶೊಷಣೆಯ ವಿಭಿನ್ನ ರೂಪಗಳು' ಬಗ್ಗೆ ಶೈಲಜ ನಾಗರಘಟ್ಟ ವಿಷಯ ಮಂಡಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ್ಯ ಡಾ. ಎಲ್ ಜನಾರ್ಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರೂಪದ ಸಿನಿಮಾ, ಆತ್ಮಕತೆ ಮತ್ತು ನಮ್ಮ ನಾಡನ್ನು ಕಂಗೆಡಿಸುತ್ತಿರುವ ಜನಪದದಲ್ಲಿ ಸಂಪ್ರದಾಯಗಳ ಹೆಸರಲ್ಲಿ ವಿಜೃಂಭಿಸುತ್ತ್ತಿರುವ ಮಹಿಳಾ ಶೊಷಣೆಯ ವಿಭಿನ್ನ ರೂಪಗಳ ಭೀಕರತೆ ಬಗ್ಗೆ ಚರ್ಚಿಸಲು ನಿಮಗೆಲ್ಲಾ ಆದರದ ಆಮಂತ್ರಣ.

No comments:

Post a Comment