ಆತ್ಮೀಯರೇ...
ಸಹಮತ ಫಿಲಮ್ ಸೊಸೈಟಿ ವತಿಯಿಂದ ಪ್ರತೀ ತಿಂಗಳೂ ಒಂದು ಸದಭಿರುಚಿಯ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದ್ದು ಅಗಸ್ಟ್ 15ರ ಸ್ವಾತಂತ್ರ್ಯದಿನಾಚರಣೆಯಂದು ಹಾಸನದ ಗೃಹವಿಜ್ಞಾನ ಕಾಲೇಜಿನಲ್ಲಿ ಸಂಜೆ 6.00ಗಂಟೆಗೆ ಭಾರತೀಯ ಚಲನಚಿತ್ರ ನಿರ್ದೇಶಕ ಸಂತೋಷ್ ಸಿವನ್ ನಿರ್ದೇಶನದ "Before the Rains" ( ಬಿಫೋರ್ ದಿ ರೈನ್ಸ್) ಎಂಬ ಇಂಗ್ಲೀಷ್ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
ಮಣಿರತ್ಮಂ ಅವರ (ರೋಜಾ, ದಿಲ್ ಸೇ. ಇರುವರ್, ರಾವಣನ್) ಬಹುತೇಕ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ದುಡಿದು ಹೆಸರು ಮಾಡಿರುವ ಸಂತೋಷ್ ಸಿವನ್ ಸ್ವತಂತ್ರ ನಿರ್ದೇಶಕರಾಗಿಯೂ ಹಲವಾರು ಚಿತ್ರಗಳನ್ನು ಮಾಡಿದ್ದಾರೆ.
1930 ರ ಸಮಯದ ಕೇರಳದ ಒಂದು ಹಳ್ಳಿಯಲ್ಲಿ ಸಂಬಾರ ವಸ್ತುಗಳ ತೋಟವನ್ನು ಹೊಸದಾಗಿ ನಿರ್ಮಿಸಲು ಬಂದಿರುವ ಬ್ರಿಟಿಷ್ ನಾಗರಿಕ ಹೆನ್ರಿ ಗೂ ಅವನ ಮನೆಯ ಮನೆಕೆಲಸದಾಳು ಈಗಾಗಲೇ ಮದುವೆಯಾಗಿರುವ ಹೆಂಗಸು ಸಜನಿಗೂ ಪ್ರೇಮಸಂಬಂಧ ಗಾಡವಾಗಿ ಬೆಸೆದಿರುವಾಗ ಬ್ರಿಟಿಷನ ಹೆಂಡತಿ ಮಕ್ಕಳು ಇಂಗ್ಲೆಂಡಿನಿಂದ ಬಂದಿಳಿಯುತ್ತಾರೆ. ಬರೀ ದೈಹಿಕ ಸುಖಕ್ಕಾಗಿ ಪ್ರೇಮಿಸಿದ್ದ ಹೆನ್ರಿ ಸಜನಿಯನ್ನು ತಿರಸ್ಕರಿಸುತ್ತಾನೆ.. ನಂತರದ ಘಟನೆಗಳಲ್ಲಿ ಸಜನಿಗೂ ಹೆನ್ರಿಗೂ ತೀರಾ ವಾಗ್ವಾದಗಳಾಗಿ ಅಂತಹ ಒಂದು ಸಂಘರ್ಷದಲ್ಲಿ ಹೆನ್ರಿಯ ರಿವಾಲ್ವರ್ ನಿಂದ ಸಜನಿ ಹತ್ಯೆ ಯಾಗುತ್ತಾಳೆ. ಸಜನಿಯ ದೇಹವನ್ನು ಹೆನ್ರಿಯ ಪರಮನಿಷ್ಟ ಸ್ನೇಹಿತ ಹಾಗೂ ಇಂಜಿನಿಯರ್ ಟಿಕೆ ನೀಲನ್ ಜತೆಸೇರಿ ಕಾಡುಪಾಲು ಮಾಡುತ್ತಾರೆ.
ಈ ನಡುವೆ ಸ್ವಾತಂತ್ರ್ಯದ ಕಿಚ್ಚು ಎಲ್ಲಾ ಊರುಗಳಲ್ಲೂ ಹೆಚ್ಚತೊಡಗಿ ಆ ಹಳ್ಳಿಯ ಜನ ಹೆನ್ರಿಯ ವಿರುದ್ದ ತಿರುಗಿ ಬೀಳುತ್ತಾರೆ. ಅದಕ್ಕೆ ಸರಿಯಾಗಿ ಸಜನಿಯ ನಾಪತ್ತೆ ಪ್ರಕರಣವೂ ಸೇರಿಕೊಂಡು ಪರಿಸ್ಥಿತಿ ಬಿಗಡಾಯಿಸುತ್ತದೆ. ಕಾಡಿನಲ್ಲಿ ಸಜನಿಯ ಶವ ಸಿಕ್ಕಿ ಶವ ಪರೀಕ್ಷೆಯಲ್ಲಿ ಸಜನಿಯ ಹತ್ಯೆ ಗೆ ಹೆನ್ರಿ ಕಾರಣನೆಂದು ತಿಳಿದುಬಂದಾಗ ಹೆನ್ರಿಯ ಗೆಳೆಯ ಟಿಕೆ ಅವನನ್ನು ಬಚಾವು ಮಾಡುತ್ತಾನೆ.. ಆದರೆ ಊರವರು ಹಳ್ಳಿಯ ಪಂಚಾಯತಿ ಕರೆದು ಅಗ್ನಿಸಾಕ್ಷಿಯಾಗಿ ಟಿಕೆ ಯನ್ನು ವಿಚಾರಣೆ ನಡೆಸಿ ಸಜನಿಯನ್ನು ಕೊಂದ ಹೆನ್ರಿಯನ್ನು ಗುಂಡಿಟ್ಟು ಕೊಲ್ಲುವ ಶಿಕ್ಷೆಯನ್ನು ನೀಡುತ್ತಾರೆ......
ಕ್ಲೈಮಾಕ್ಸ್ ದೃಶ್ಯದಲ್ಲಿ ರಿವಾಲ್ವರ್ ಹಿಡಿದ ಟಿಕೆಗೆ ಹೆನ್ರಿಗೆ ಗುಂಡಿಕ್ಕಲು ಸಾಧ್ಯವಾಗುವುದಿಲ್ಲ... ಮುಂಗಾರು ಮಳೆಯ ಮೊದಲ ಹನಿಗಳು ನೆಲಕ್ಕೆ ಅಪ್ಪಳಿಸುತ್ತಿರುವಂತೆಯೇ ಹೆನ್ರಿ ಮತ್ತು ಟಿಕೆ ಯವರ ದಾರಿಗಳು ಬೇರೆ ಬೇರೆಯಾಗಿ ಗೋಚರಿಸುತ್ತವೆ.
ಹೆನ್ರಿಯಾಗಿ ಲೈನಸ್ ರೋಚ್, ಟಿಕೆ ನೀಲನ್ ಪಾತ್ರದಲ್ಲಿ ರಾಹುಲ್ ಬೋಸ್, ಸಜನಿಯಾಗಿ ನಂದಿತಾ ದಾಸ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಜೊತೆಗೆ ಉಳಿದ ಪಾತ್ರಗಳಲ್ಲಿ ಮಲಯಾಳಂ ಚಿತ್ರರಂಗದ ನಟರುಗಳು ನಟಿಸಿದ್ದಾರೆ.
ನಿರ್ದೇಶನದ ಜೊತೆಗೆ ಸಿನಿಮಾಟೋಗ್ರಾಫಿಯನ್ನೂ ಸಂತೋಷ್ ಸಿವನ್ ಉತ್ತಮವಾಗಿ ನಿರ್ವಹಿಸಿದ್ದಾರೆ...
ಹಾಸನದ ಸದಭಿರುಚಿಯ ಸಿನಿಮಾ ವೀಕ್ಷಕರಿಗೆ ಒಂದು ಸದವಕಾಶ......

No comments:
Post a Comment