Thursday 1 August 2013

ಕರ್ನಾಟಕದ ಅಭಿವೃದ್ದಿ ರಾಜಕಾರಣ..... ವಿಚಾರ ಸಂಕಿರಣ


ಸಹಮತ ವೇದಿಕೆ ಹಾಸನ, ಎಸ್ ಎಫ್ ಐ, ಡಿವೈಎಫ್ ಐ ಮತ್ತು ಬಿಜಿವಿಎಸ್ ಹಾಸನ ಸಹಯೋಗದಲ್ಲಿ ಸ್ಥಳೀಯ ಸ್ವಾಭಿಮಾನಿ ಭವನದಲ್ಲಿ ದಿನಾಂಕ 09-06-2013ರ ಭಾನುವಾರ ಹಂಪಿ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀ ಎಮ್ ಚಂದ್ರ ಪೂಜಾರಿಯವರಿಂದ 'ಕರ್ನಾಟಕದ ಅಭಿವೃದ್ದಿ ರಾಜಕಾರಣ' ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಮಾನಸ ಗಂಗೋತ್ರಿ ಹಾಸನ ಕೇಂದ್ರದ   ಪ್ರೋ . ಶಿವೇಗೌಡರವರು ಅಧ್ಯಕ್ಷ್ಯತೆ ವಹಿಸಿದ್ದರು.

             ಕರ್ನಾಟಕದ ಏಕೀಕರಣದ ಕಾಲದಿಂದ ಇಂದಿನವರೆಗೂ ತೀರಾ ಕನಿಷ್ಟ ಸಂಖ್ಯೆಯಲ್ಲಿರುವ ಒಂದು ಸಮುದಾಯ ನಿರಂತರ ಸಾಂಸ್ಕೃತಿಕ ರಾಜಕಾರಣದ  ಮೂಲಕ ಇತರ ಸಮುದಾಯಗಳ ಜನಸಾಮಾನ್ಯರು  ಕೂಡಾ ಯಾವುದನ್ನು ಓದಬೇಕು ? ಯಾವುದನ್ನು ನೋಡಬೇಕು ? ಯಾವುದನ್ನು  ಕೇಳಬೇಕು ? ಯಾವ ದೇವರನ್ನು ಪೂಜಿಸಬೇಕು ? ಯಾವ ಸಂಸ್ಕೃತಿಯನ್ನು ಅನುಸರಿಸಬೇಕು ? ಎಂಬುದನ್ನು ಸಾಂಸ್ಕೃತಿಕ ಯಜಮಾನಿಕೆಯ ಮೂಲಕ ಬಲವಂತವಾಗಿ ಹೇರಲಾಗಿರುವ ಸತ್ಯವನ್ನು  ಶ್ರೀ ಚಂದ್ರ ಪೂಜಾರಿಯವರು ಬಿಚ್ಚಿಟ್ಟರು.

            ಬಹುಸಂಖ್ಯಾತ ಇತರ ಸಮುದಾಯದ ಜನರು ಮೇಲ್ವರ್ಗದವರ ಈ ಸಾಂಸ್ಕೃತಿಕ ಯಜಮಾನಿಕೆಯನ್ನು ವಿರೋಧಿಸದೇ ಬರೀ ಆರ್ಥಿಕ ಮೀಸಲಾತಿ, ಉದ್ಯೋಗ ಮೀಸಲಾತಿ ಹಾಗೂ ಶೈಕ್ಷ್ಯಣಿಕ ಮೀಸಲಾತಿಯಂತಹ ಬಾಹ್ಯಲಕ್ಷಣಗಳ ಹಕ್ಕನ್ನು ಮಾತ್ರ ಪ್ರತಿಪಾದಿಸಿದ್ದರಿಂದ ಸ್ವಾತಂತ್ರ್ಯಾನಂತರದ ಕರ್ನಾಟಕದ ಅಭಿವೃದ್ದಿಯೆಂದರೆ ಅದು ಬರೀ ಮೇಲ್ವರ್ಗದವರ ಅಭಿವೃದ್ದಿಯಾಗಿದೆ...ಅದ್ದರಿಂದ ಅಭಿವೃದ್ದಿವಂಚಿತ ಜನಸಮುದಾಯಗಳು ತಮ್ಮ ಸಮುದಾಯಗಳ ಸಾಂಸ್ಕೃತಿಕ ಹಕ್ಕನ್ನು ಪ್ರತಿಪಾದಿಸಲು ಸಾಂಸ್ಕೃತಿಕ ರಾಜಕಾರಣವನ್ನು ಕೈಗೆತ್ತಿಕೊಳ್ಳಬೇಕೆಂದು ಹೇಳಿದರು.

ಅವರ ವಿಚಾರಗಳ ಕುರಿತು ವೇದಿಕೆಯ ಸದಸ್ಯರು ಮುಂದೆ ಬರೆಯಲಿದ್ದಾರೆ. ವಿಚಾರ ಸಂಕಿರಣದಲ್ಲಿ ನಡೆದ ಘಟನಾವಳಿಗಳ ಒಂದಷ್ಟು ದೃಶ್ಯಗಳು........























No comments:

Post a Comment