ಸಹಮತ ಫಿಲಮ್ ಸೊಸೈಟಿಯು ತನ್ನ ಪ್ರತೀ ತಿಂಗಳ ಚಲನಚಿತ್ರ ಪ್ರದರ್ಶನದ ಕಾರ್ಯಕ್ರಮದ ಪ್ರಯುಕ್ತ ಸೆಪ್ಟೆಂಬರ್ 21ರಶನಿವಾರ ಸಂಜೆ 6.00 ಗಂಟೆಗೆ ಹಾಸನದ ಸರಕಾರಿ ಗೃಹವಿಜ್ಞಾನ ಕಾಲೇಜಿನಲ್ಲಿ ಮರಾಠಿಯ ಖ್ಯಾತ ಚಲನಚಿತ್ರ 'ಹರೀಶ್ಚಂದ್ರಾಚಿ ಫ್ಯಾಕ್ಟರಿ' ಚಲನಚಿತ್ರವನ್ನು ಪ್ರದರ್ಶಿಸಲಿದೆ.
ಭಾರತೀಯ ಚಲನಚಿತ್ರರಂಗಕ್ಕೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಭಾರತದ ಪ್ಪ್ರಥಮ ಚಲನಚಿತ್ರವನ್ನು ತಯಾರಿಸಿದ ಮಹಾನುಭಾವ ದಿಗ್ಗಜ ಭಾರತೀಯ ಚಿತ್ರರಂಗದ ಪಿತಾಮಹ 'ದಾದಾಸಾಹೇಬ್ ಗೋವಿಂದ್ ದುಂಡಿರಾಜ್ ಪಾಲ್ಕೆ' ಯವರು ತಮ್ಮ ಪ್ರಥಮ ಚಲನಚಿತ್ರ 'ರಾಜಾ ಹರೀಶ್ಚಂದ್ರ' ವನ್ನು ನಿರ್ಮಿಸಿದ ಹಿನ್ನಲೆಯುಳ್ಳ ಈ ಚಲನಚಿತ್ರವು ದಾದಾಸಾಹೇಬರಿಗೆ ಶೃದ್ದಾಂಜಲಿಯ ರೂಪದಲ್ಲಿ ನಿರ್ಮಿತವಾಗಿದೆ.
1900ರ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ಪದವಿ ಓದಿ ಪ್ರಿಂಟಿಂಗ್ ಉದ್ಯಮದ ಮಾಲಿಕರಾಗಿದ್ದ ಪಾಲ್ಕೆಯವರು ಉದ್ಯೋಗ ಕೈಬಿಟ್ಟು ನಂತರ ಅಕಸ್ಮತ್ತಾಗಿ ನೋಡಿದ ಯುರೋಪಿನ ಚಲನಚಿತ್ರವನ್ನು ನೋಡಿ ಪ್ರೇರಿತರಾಗಿ ತಮ್ಮಲ್ಲಿ ಇರುವ ಎಲ್ಲಾ ಹಣ ತೆಗೊಂಡು ಚಲನಚಿತ್ರಗಳ ನಿರ್ಮಾಣದ ಬಗ್ಗೆ ಅಭ್ಯಸಿಸಲು ದೂರದ ಲಂಡನಿಗೆ ಪ್ರಯಾಣ ಬೆಳೆಸುತ್ತಾರೆ..ತದನಂತರ ಅಲ್ಲಿನ ತಾಂತ್ರಿಕತೆಯನ್ನು ಭಾರತಕ್ಕೆ ತಂದು 1913ರಲ್ಲಿ ಪ್ರಥಮ ಚಲನಚಿತ್ರ 'ರಾಜಾ ಹರೀಶ್ಚಂದ್ರ' ವನ್ನು ನಿರ್ಮಿಸಿದ ಅದ್ಭುತ ಸಾಧನೆಯ ಕ್ಷಣಗಳನ್ನು ಮತ್ತೆ ಪೋಣಿಸಲಾಗಿದೆ.
ದಾದಾಸಾಹೇಬ್ ಪಾಲ್ಕೆಯವರ ಜೀವನದ ಬಗ್ಗೆ ಚಿತ್ರ ನಿರ್ದೇಶಿಸಿದ 'ಪರೇಶ್ ಮೊಕಾಶಿ' ಗೆ ಇದು ಮೊದಲ ಚಲನಚಿತ್ರವೇ ...! ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಪರೇಶ್ ಮೊಕಾಶಿ ಯವರ ''ಹರೀಶ್ಚಂದ್ರಾಚಿ ಫ್ಯಾಕ್ಟರಿ' ಚಿತ್ರಕ್ಕೆ ಪುಣೆ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಪ್ರಶಸ್ತಿ ಸಿಕ್ಕಿದ್ದು ಮಾತ್ರವಲ್ಲ ಆ ವರ್ಷದ ಆಸ್ಕರ್ ಪ್ರಶಸ್ತಿ ಯ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗುವ ಅರ್ಹತೆಯನ್ನೂ ಗಳಿಸಿದ ಎರಡನೆಯ ಮರಾಠಿ ಚಲನಚಿತ್ರವೆಂಬ ಹೆಗ್ಗಳಿಕೆಯನ್ನು ಪಡೆಯಿತು.
ಸಾಮಾನ್ಯ ನಿರ್ದೇಶಕರ ಕೈಯಲ್ಲಿ ಬರೀ ಡಾಕ್ಯುಮೆಂಟರಿ ಚಿತ್ರವಾಗುವ ಎಲ್ಲಾ ಅಪಾಯಗಳೂ ಇದ್ದ ಈ ಚಿತ್ರ ಪರೇಶ್ ಮೊಕಾಶಿ ಯವರ ನಿರ್ದೇಶನದ ಜಾದೂ ಸ್ಪರ್ಶದಿಂದ ಸಿನಿಮಾ ರಂಗದ ಅತ್ಯುತ್ತಮ ಚಿತ್ರವಾಗಿ ನಿರ್ಮಾಣವಾಗಿದೆ.
ನಿಮಗಾಗಿ ಚಿತ್ರದ ಕೆಲವು ದೃಶ್ಯಾವಳಿಗಳು

No comments:
Post a Comment