ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ 'ಸಹಮತ ವೇದಿಕೆ' ಸಾಹಿತ್ತ್ಸ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ. ವೇದಿಕೆಯ ಸದಸ್ಯರ ಮನದಾಳದ ಅಭಿವ್ಯಕ್ತಿಗಳು, ವೇದಿಕೆ ಸಂಘಟಿಸಿದ ಕಾರ್ಯಕ್ರಮಗಳ ವರದಿಗಳನ್ನು 'ಸಹಮತ ಹಾಸನ' ಬ್ಲಾಗ್ ನಲ್ಲಿ ಪ್ರಕಟಿಸಲಾಗುತ್ತದೆ. ನಮ್ಮೀ ವಿಚಾರಗಳ ಬಗ್ಗೆ ಸಹಮತ, ಕುತೂಹಲ, ಅನುಮಾನ ಹಾಗೂ ತಗಾದೆ ಇರುವವರೊಂದಿಗೆ ಸಂವಾದಕ್ಕಾಗಿ.......
No comments:
Post a Comment